ಝೀರೋ ಮೈಲ್ ಸ್ಟೋನ್ (ಮರಾಠಿ:शून्य मैलाचा दगड), ೧೯೦೭ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಬ್ರಿಟಿಷ್‌ರು, "ಗ್ರೇಟ್ ಟ್ರಿಗೊನೊಮೆಟ್ರಿಕಲ್ ಸರ್ವೆ ಆಫ್ ಇಂಡಿಯಾ" ಕಾರ್ಯಕ್ರಮದ ಮೂಲಕ ನಿರ್ಮಿಸಿದ ಸ್ಮಾರಕವಾಗಿದೆ. ಇದು ಮರಳುಗಲ್ಲಿನಿಂದ ಮಾಡಲ್ಪಟ್ಟ ಒಂದು ಕಂಬವನ್ನೂ ಮತ್ತು ಜಿಟಿಎಸ್ ಸ್ಟ್ಯಾಂಡರ್ಡ್ ಬೆಂಚ್ ಮಾರ್ಕ್ ಅನ್ನು ಪ್ರತಿನಿಧಿಸುವ ಮತ್ತೊಂದು ಸಣ್ಣ ಕಲ್ಲು ಮತ್ತು ನಾಲ್ಕು ಓಡುತ್ತಿರುವ ಕುದುರೆಗಳನ್ನು ಒಳಗೊಂಡಿದೆ. ಕಂಬದ ಮೇಲ್ಭಾಗದ ಎತ್ತರವು ಸರಾಸರಿ ಸಮುದ್ರ ಮಟ್ಟಕ್ಕಿಂತ ೧೦೨೦.೧೭೧ ಅಡಿಗಳು. ೨೦೦೮ ರಲ್ಲಿ, ದಿ ಟೈಮ್ಸ್ ಆಫ್ ಇಂಡಿಯಾ ಮುಂದಿನ ಐದು ವರ್ಷಗಳ ಕಾಲ ಸ್ಮಾರಕವನ್ನು ನಿರ್ವಹಿಸಲು ಕೈಗೊಂಡಿತ್ತು. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಇದು ವಸಾಹತುಶಾಹಿ ಭಾರತದ ಭೌಗೋಳಿಕ ಕೇಂದ್ರವನ್ನು ಗುರುತಿಸುವ ಒಂದು ಸ್ಮಾರಕವೆಂದು ಯಾವುದೇ ಪುರಾವೆಗಳಿಲ್ಲ, ಅಥವಾ ಬ್ರಿಟಿಷರಿಂದ ದೂರವನ್ನು ಅಳೆಯಲು ಝೀರೋ ಮೈಲ್ ಸ್ಟೋನ್ ಅನ್ನು ಸ್ಥಾಪಿಸಲಾಗಿದೆ ಎಂದು ಯಾವುದೇ ಪುರಾವೆಗಳಿಲ್ಲ. ನಾಗ್ಪುರದ ಝೀರೋ ಮೈಲ್ ಸ್ಥಂಭದ ಷಡ್ಭುಜಾಕಾರ ತಳದಿಂದ ವಿವಿಧ ಸ್ಥಳಗಳಿಗೆ ಇರುವ ದೂರ, ಈ ಕೆಳಗಿನಂತಿದೆ.